ಸಂತ ಶಿಶುನಾಳ ಶರೀಫರು

ಸಂತ ಶಿಶುನಾಳ ಶರೀಫರು ನೂರಾರು ತತ್ವಪದಗಳನ್ನು ರಚಿಸಿ, ಜೀವನದ ಸತ್ಯ ಅಸತ್ಯಗಳನ್ನು ತಮ್ಮ ತತ್ವಪದಗಳಲ್ಲಿ ಜನಸಾಮಾನ್ಯರಿಗೆ ಸರಳ ಭಾಷೆಯಲ್ಲಿ ಮನಮುಟ್ಟುವಂತೆ ಮಾಡಿದರು. ಶರೀಫರ ಬಾಲ್ಯದ ಕೆಲವು ಘಟನೆಗಳು ಮತ್ತು ಅವರ ಜೀವನದಲ್ಲಿ ಗೋವಿಂದ ಭಟ್ಟರ ಪ್ರಭಾವ, ಶರೀಫರನ್ನು ಸಾಮಾಜ ಸುಧಾರಕರನ್ನಾಗಿ ಹೇಗೆ ಪರಿವರ್ತಿಸಿತು ಎಂದು ಈ  ನಾಟಕದ ಮೂಲಕ ತಿಳಿಸುವ ಪ್ರಯತ್ನ ಮಾಡಿದ್ದೆವು.



ನೃತ್ಯ ರೂಪಕ- ಗೊಂಬೆ ನಗರ

ಚೀನೀ ಆಟಿಕೆಗಳ ಮಾರುಕಟ್ಟೆಯ ಪ್ರಭಾವದಿಂದ  ದೇಶೀಯ ಆಟಿಕೆಗಳ ಮೇಲೆ ಮಾರುಕಟ್ಟೆಯಲ್ಲಿ  ಬೇಡಿಕೆ ಕುಸಿತಗೊಂಡಿದೆ. ಸರ್ಕಾರದ ನೆರವು ಇಲ್ಲದೆ  ಆಟಿಕೆ ಉದ್ಯಮವು ಹಣಕಾಸಿನ ಬಿಕ್ಕಟ್ಟನ್ನು ಎದುರಿಸುತ್ತಿದೆ ಹಾಗೂ ಬಹುತೇಕ ನಶಿಸುವ ಹಾದಿಯಲ್ಲಿದೆ.  ದೇಶೀಯ ಆಟಿಕೆಗಳು ಭಾರತೀಯ ಅಭಿರುಚಿಯನ್ನು  ಪ್ರತಿಬಿಂಬಿಸುತ್ತದೆ. ಕರ-ಕುಶಲತೆಯನ್ನು ಪುನರ್ಜೀವನಗೊಳಿಸುವುದರೊಂದಿಗೆ, ಕುಶಲ ಕರ್ಮಿಗಳಿಗೆ  ಬೆಂಬಲ ನೀಡುವುದು ನಮ್ಮ ಜವಾಬ್ದಾರಿ. ಹಾಗಾಗಿ ಈ ವೈಭವವನ್ನು ನಮ್ಮ ಮಕ್ಕಳಿಗೆ ಪರಿಚಯಿಸುವುದು ಮತ್ತು ನಮ್ಮ ಆಟಿಕೆಗಳ ಬಗ್ಗೆ  ಮಾಹಿತಿ ನೀಡವ ಕಿರು ಪ್ರಯತ್ನವೇ ಈ "ಗೊಂಬೆ ನಗರ" ನೃತ್ಯ ರೂಪಕ.

ಪರಕಲ್ಪನೆ ಮತ್ತು ನೃತ್ಯ ಸಂಯೋಜನೆ - ವಿದೂಷಿ. ಶ್ರೀಮತಿ ಸುಪ್ರಿಯ ಹರಿಪ್ರಸಾದ್.



ವಿನಮ್ರ ಹಣತೆ

ವಿನಮ್ರತೆಯು ನಿಜವಾದ ಜ್ಞಾನದ ಲಕ್ಷಣ. ಇದನ್ನು ಮನುಷ್ಯ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಉತ್ಕೃಷ್ಟ ಪಥದಲ್ಲಿ ಸಾಗಲು ಸಾಧ್ಯ ಎಂಬ ಸಂದೇಶದೊಂದಿಗೆ, ಸೌತ್ ಬೃಂಸ್ವಿಕ್ ಕನ್ನಡ ಶಾಲೆಯ ಮಕ್ಕಳು, "ವಿನಮ್ರ ಹಣತೆ" ಎಂಬ ಕಿರು ರೂಪಕವನ್ನು ಪ್ರಸ್ತುತ ಪಡಿಸಿದರು.